ತೋಟವನ್ನು ಮತ್ತೆ ಸಹಜ ಸ್ಥಿತಿಗೆ ತರುವುದು ಹೇಗೆ ಅನ್ನುವುದು ಬೃಹದಾಕಾರದ ಪ್ರಶ್ನೆಯಾಗಿ ಲಕ್ಷ್ಮೀನಾರಾಯಣನಿಗೆ ಕಾಡುತ್ತಿತ್ತು. ಅಲ್ಲಿ ಇಲ್ಲಿ ಊರಿನವರ ಹತ್ತಿರ ಕೈ ಸಾಲ ಮಾಡಿ ಚಿಕ್ಕ ಪುಟ್ಟ ಕೆಲಸಗಳಾದ ಹುಲ್ಲು ಸೌರುವುದು, ಕಪ್ಪು (ಕಾಲುವೆ) ಹೆರೆಯುದು ಈ ತರ ಕೆಲಸಗಳನ್ನ ಪ್ರಾರಂಭಿಸಿದ. ಎಲ್ಲಾ ವಿಷಯಗಳನ್ನ ಅರ್ಥ ಮಾಡಿಕೊಂಡು ಹೋಗುವಷ್ಟು ವಯಸ್ಸು ಇನ್ನೂ ಲಕ್ಷ್ಮೀನಾರಾಯಣನಿಗೆ ಆಗಿರಲಿಲ್ಲ. ಹದಿನಾರರ ಹರೆಯದ ಹುಡುಗರಿಗೆ ಕಾಡುವ ವಯೋಸಹಜವಾದ ಭಯಕೆಗಳು ಆಸೆಗಳು ಈತನನ್ನೂ ಕಾಡುತಿದ್ದವು. ಘೋರ ತಪಸ್ಸಿಗೆ ಕುಳಿತ ಮಹರ್ಷಿಯಂತೆ ತನ್ನೆಲ್ಲಾ ಆಥ್ಮಬಲವನ್ನು ಒಗ್ಗೂಡಿಸಿಕೊಂಡು ಭಯಕೆಗಳನ್ನು ಹತ್ತಿಕ್ಕಲ್ಲು ಪ್ರಯತ್ನಿಸುತ್ತಿದ್ದ. ತನ್ನ ಬಾಲ್ಯಾವಸ್ಥೆಯಲ್ಲಿ ಯಾವುದೇ ಮನುಷ್ಯ ಪ್ರೀತಿಯನ್ನು ಸರಿಯಾಗಿ ಕಾಣದ ಲಕ್ಷ್ಮೀನಾರಾಯಣ ಕ್ರಮೇಣವಾಗಿ ಪ್ರಾಣಿ ಪ್ರಿಯನಾಗಿ ಬದಲಾಗಿದ್ದ. ಮನೆಯಲ್ಲಿದ್ದ ಹಸುಗಳು, ನಾಯಿಗಳು, ಬೆಕ್ಕು ಇವೆಲ್ಲಾ ಅವನಿಗೆ ಅಂತ್ಯಂತ ಆತ್ಮೀಯವಾದ ಗೆಳೆಯರಾಗಿದ್ದವು.
ಹದಿನಾರು ವರ್ಷ ಆಯಿತು , ಬ್ರಾಹ್ಮಣ ಆಗಿ ಒಂದು ಜನಿವಾರ ಕೂಡ ಇಲ್ಲ, ಹೋಗಿ ಯಾವುದಾದರೂ ಸಾಮೂಹಿಕ ಉಪನಯನದಲ್ಲಿ ಒಂದು ದಾರ ಹಾಕಿಕೊ ಮಾರಾಯ ಅಂತ ಯಾರೋ ಹಿರಿಯರು ಹೇಳಿದಾಗ ಲಕ್ಷ್ಮೀನಾರಾಯಣನ ಮನಸ್ಸಿಗೆ ಬಹಳ ಖೇದವಾಗಿತ್ತು. ಬ್ರಾಹ್ಮಣ ಹಾಗಿರಬೇಕು ಹೀಗಿರಬೇಕು ಎಂದು ಹೇಳುವ ಊರುಮನೆಯವರಾಗಲಿ, ಬಂಧು ಬಳಗದವರಾಗಲಿ ಯಾರು ಇವನ ಆಪ್ಪನಿಗೆ ಇವನಿಗೊಂದು ನೂಲು ಹಾಕುವಂತೆ ಹೇಳಿರಲಿಲ್ಲ. ಅಕ್ಕ ಪಕ್ಕದ ಮನೆಯವರೆಲ್ಲಾ ತಮ್ಮ ಮಕ್ಕಳಿಗೆ ಉಪನಯನವನ್ನ ಮದುವೆಗಿಂತಾ ಜೋರಾಗಿ ಮಾಡಿದ್ದನ್ನ ಇವನು ನೋಡಿದ್ದ. ನನ್ನ ಉಪನಯನವೂ ಹೀಗೇ ಆಗಬಹುದೆಂದು ಬಾಲ್ಯದಲ್ಲಿ ಕನಸು ಕಂಡಿದ್ದ ಲಕ್ಷ್ಮೀನಾರಾಯಣನಿಗೆ ಅದರ ಬಗ್ಗೆ ಯಾರೂ ಅಷ್ಟೊಂದು ತಲೆ ಕೆಡಿಸಿಕೊಳ್ಳುತ್ತಿಲ್ಲ ಎಂದು ಅರಿವಾದಾಗ ಮನಸ್ಸಿಗೆ ಬಹಳ ನೋವಾಗಿತ್ತು. ಹಾಗಾದರೆ ನಾನು ಅಧಿಕೃತವಾಗಿ ಬ್ರಹ್ಮಣನಾಗಲು ಅವರ ಇವರ ಕಾಲು ಹಿಡಿದು ದೇವಸ್ಥಾನದಲ್ಲಿ ಸಾಮೂಹಿಕ ಉಪನಯನದಲ್ಲಿ ಮಾಡಿಕೊಳ್ಳಬೇಕೆ?? ಹೀಗೆ ಅಂದ್ರೆ ನನಗೆ ಆ ಬ್ರಾಹ್ಮಣ ಪಟ್ಟವೇ ಬೇಡ ಎಂದು ತೀರ್ಮಾನಿಸಿಬಿಟ್ಟಿದ್ದ.
ತೋಟದ ಕೆಲಸದ ಕಡೆ ಜಾಸ್ತಿ ಗಮನ ಕೊಟ್ಟಿದ್ದ ಲಕ್ಷ್ಮೀನಾರಾಯಣ ತೋಟವನ್ನೆಲ್ಲ ಅಚ್ಚುಕಟ್ಟಾಗಿ ಸಿದ್ದಪಡಿಸಿದ್ದ. ತನ್ನ ರೇಷನ್ ಕಾರ್ಡ್ ಹಿಡಿದು ಗ್ರಾಮೀಣಾಭಿವೃದ್ದಿ ಸೊಸೈಟೀಗೆ ಹೋಗಿ ಅಡಿಕೆ ಸಸಿಗೆ ಸ್ವಲ್ಪ ರಿಯಾಯಿತಿ ಕೊಡಿ ಮಾರಾಯ ಅಂದಾಗ, ಬ್ರಾಹ್ಮಣರಿಗೆ ಎಂಥಾ ರಿಯಾಯಿತಿ?? ಮೇಲ್ವರ್ಗದವರೆಲ್ಲಾ ಪೂರ ದುಡ್ಡು ಕೊಟ್ಟೇ ತಗೋಬೇಕು ಅಂತ ಸೊಸೈಟೀಯ ಮೇಲ್ವಿಚಾರಕ ಗ್ರೀನ್ ಕಾರ್ಡ್ ಯೆಲ್ಲೊ ಕಾರ್ಡ್ ಬಗ್ಗೆ ಅರ್ಧ ಘಂಟೆ ತಲೆ ತಿಂದಿದ್ದ. ಸದ್ಯಕ್ಕೆ ಇವನಿಗಾಗಿ ಸೀಮೆ ಎಣ್ಣೆ ಸಕ್ಕರೆಯನ್ನಾದರೂ ಕೊಡುತ್ತಿದ್ದ ಆತನ ಹತ್ತಿರ ಜಾಸ್ತಿ ವಾದ ಮಾಡಿದರೆ ನಾಳೆಯಿಂದ ಅದೂ ಸಿಗುವುದಿಲ್ಲ ಎಂದು ಸುಮ್ಮನಾಗಿದ್ದ. ಕಲಿಯುಗದಲ್ಲಿ ಬ್ರಾಹ್ಮಣನಾಗಿ ಹುಟ್ಟು ಅನ್ನೋದು ಶಾಪವಂತೆ ಅಂತ ಯಾರೋ ಹೇಳಿದ್ದ ಮಾತು ಲಕ್ಷ್ಮೀನಾರಾಯಣನ ತಲೆಗೆ ಬಂದಿತ್ತು. ಯಾಕಾದರೂ ಬ್ರಾಹ್ಮಣನಾಗಿ ಹುಟ್ಟಿದೆನೋ ಅಂತ ಅಂದುಕೊಂಡು ಅಡಿಕೆ ಸಸಿ ಕರೀದಿಗೆ ಬೇಕಾದ ದುಡ್ಡಿಗೆ ಅವರಿವರ ಕಾಲು ಹಿಡಿಯಲು ದೃಡಮನಸ್ಸು ಮಾಡಿಕೊಂಡ.
ಹಾಕೊದಾದ್ರೆ ಮಂಗಳದ ತಳಿ ಗಿಡಗಳನ್ನ ಹಾಕು ಬೇಗ ಉತ್ಪತ್ತಿ ಬರುತ್ತೆ ಅಂತ ದುಡ್ಡು ಕೊಟ್ಟ ದೊಡ್ಡ ಮನುಷ್ಯ ಹೇಳಿದಾಗ ಇವನೂ ಅದೇ ತೀರ್ಮಾನಕ್ಕೆ ಬಂದಿದ್ದ. ಹದಿನೈದು ದಿನ ಅವರಿವರ ಮನೆ ತಿರುಗಿ ದುಡ್ಡಿಗಾಗಿ ಎಲ್ಲಾರ ಕಾಲೂ ಹಿಡಿದಿದ್ದ. ಜೀವನದಲ್ಲಿ ಚೆನ್ನಾಗಿರುವ ಕೆಲವು ಸಂಭಂಧಿಕರು ಜಗತ್ತಿನಲ್ಲಿ ಎಲ್ಲಾ ತೊಂದರೆಗಳೂ ಅವರಿಗೇ ಇದೆ, ಇವನಿಗೆ ದುಡ್ಡು ಕೊಡಲು ಅವರ ಹತ್ತಿರವೇ ಏನೂ ಇಲ್ಲ ಅನ್ನುವ ರೀತಿಯಲ್ಲಿ ಮಾತನಾಡಿದ್ದರು. ಇನ್ನೂ ಕೆಲವರು ಇವನು ಹೇಗಿದ್ದಾನೆ ಅಂತ ಕೇಳುವ ಬದಲು ನಿಮ್ಮಪ್ಪ ಈಗಲೂ ಕುಡೀತಾನಾ?? ಈಗಲೂ ಆ ಹುಡುಗಿಯರ ಮನೆಗ ಹೋಗಿ ಬರ್ತಾನಾ ಅಂತ ಇವನ ಜೀವನದ ಕಹಿ ಘಟನೆಗಳನ್ನ ಕೆದಕಿ ಇವನ ಮನಸ್ಸಿಗೆ ಘಾಸಿಯುಂಟು ಮಾಡಿದ್ರು. ಹಾಗೂ ಹೀಗೂ ದುಡ್ಡು ಹೊಂದಿಸಿ ಮಂಗಳದ ಸಸಿಗಳನ್ನ ತಂದು ತೋಟದಲ್ಲಿ ನೆಡಲಾರಂಭಿಸಿದ.
ಹೊರಗಡೆಯಿಂದ ಗೊಬ್ಬರ ಕರೀದಿಸಲು ದುಡ್ಡಿರದಿದ್ದರಿಂದ ಸಾವಯವ ಕೃಷಿಗೆ ಅವಲಂಭಿತನಾದ ಲಕ್ಷ್ಮೀನಾರಾಯಣ. ಮನೆಯಲ್ಲಿದ್ದ ಎರಡು ಹಸುಗಳಿಂದ ಅಷ್ಟೊಂದು ಗೊಬ್ಬರ ಮಾಡಲಾರನೆಂದು ಎರಡು ಸಿಂಧಿ ಹಸುಗಳನ್ನು ಕರೀದಿಸಿದ್ದ. ತೋಟದ ಉತ್ಪತ್ತಿ ಮನೆ ಸಾಗಿಸಲು ಸಾಕಾಗುತ್ತಿರಲಿಲ್ಲ. ಉತ್ಪತ್ತಿಗೆ ಹತ್ತು ವರ್ಷ ತೆಗೆದುಕೊಳ್ಳುವ ಅಡಿಕೆಯ ಜೊತೆ ಚಿಕ್ಕ ಪುಟ್ಟ ಬೆಳೆಗಳಾದ ಏಲಕ್ಕಿ, ಜಾಕಾಯಿ , ಲವಂಗದ ಗಿಡಗಳನ್ನೂ ಬೆಳೆಸುತ್ತಿದ್ದ. ಅಲ್ಲಲ್ಲಿ ಕಾಫೀ ಗಿಡಗಳನ್ನೂ ನೆಟ್ಟಿದ್ದ ಲಕ್ಷ್ಮೀನಾರಾಯಣನಿಗೆ ಅವುಗಳ ಬೆಳೆಗಾಗಿ ಎರಡರಿಂದ ಮೂರು ವರ್ಷ ಕಾಯಬೇಕಿತ್ತು. ಈ ಮಧ್ಯ ಜೀವನಕ್ಕಾಗಿ ಮಳೆಗಾಲದಲ್ಲಿ ಹಲಸಿನಕಾಯಿ ಹಪ್ಪಳ, ಮುರುಗನ ಹುಳಿ ಬೇರೆ ಸಮಯದಲ್ಲಿ ನಿಂಬೆಹಣ್ಣು , ಜೀರಿಗೆ ಮೆಣಸು, ಚಕ್ಕೋತ ಹೀಗೆ ಹತ್ತು ಹಲವಾರು ವ್ಯಾಪಾರಗಳನ್ನ ಮಾಡುತ್ತಿದ್ದ.
ಹೀಗೆ ಬರುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲಿ ಮನೆಯ ಕರ್ಚು ತೂಗಿಸುತ್ತಿದ್ದ. ಬರುತ್ತಿದ್ದ ಸ್ವಲ್ಪ ದುಡ್ಡಿನಲ್ಲಿ ಒಳ್ಳೆಯ ಬಟ್ಟೆಗಳನ್ನ ಖರೀದಿಸಲು ಲಕ್ಷ್ಮೀನಾರಾಯಣನಿಗೆ ಆಗುತ್ತಿರಲಿಲ್ಲ. ಹೊರಗಡೆ ಹೋದಾಗ ವಯೋಸಜವಾದ ಇವನ ಭಯಕೆಗಳು ಹುಡುಗಿಯರೆಡೆಗೆ ಕಣ್ಣಾಯಿಸುವಂತೆ ಪ್ರೇರೇಪಿಸುತ್ತಿದ್ದವು . ಇವನ ಮಾಸಲು ಬಟ್ಟೆ, ಎಣ್ಣೆ ಕಾಣದ ಕೂದಲು, ಹಳೆಯ ಹವಾಯಿ ಚಪ್ಪಲಿಯನ್ನ ನೋಡಿದ ಯಾವುದೇ ಹುಡುಗಿ ಇವನೆಡೆಗೆ ಮತ್ತೊಮ್ಮೆ ಕಣ್ಣಾಯಿಸುತ್ತಿರಲಿಲ್ಲ. ಇದನ್ನೆಲ್ಲ ನೋಡಿ ಒಮ್ಮೊಮ್ಮೆ ದುಃಖ ಹೆಚ್ಚಾಗಿ ಒಬ್ಬನೇ ಕೂತು ಆಳುತ್ತಿದ್ದ ಲಕ್ಷ್ಮೀನಾರಾಯಣನಿಗೆ ತನ್ನ ಆರ್ಥಿಕ ಪರಿಸ್ಥಿತಿಯೇ ಇದಕ್ಕೆಲ್ಲಾ ಕಾರಣ ಎಂದು ಮನದಟ್ಟಾಗಿತ್ತು. ಹಾಗೂ ಹೀಗೂ ಹದಿನೆಂಟರ ಗಡಿ ತಲುಪಿದ್ದ ಲಕ್ಷ್ಮೀನಾರಾಯಣನಿಗೆ ಜಗತ್ತಿನಲ್ಲಿ ಯಾವುದು ಸತ್ಯ ಯಾವುದು ಸುಳ್ಳು ಎಂಬುದರ ಅರಿವು ಸ್ವಲ್ಪ ಸ್ವಲ್ಪವೇ ಆಗತೊಡಗಿತ್ತು.
ಸ ಶೇ ಷ
ಪ್ರಿಯಾಂಕ್ ರಾವ್

No comments:
Post a Comment