ಹಾಗೆಯೇ ವಾಪಸ್ ಮನೆಯವರೆಗೂ ಬಂದು ತಲುಪಿದ್ದೆ. ಮೇಲೆ ಹೋಗಿ ಕಾಫೀ ತೋಟ ಸುತ್ತಿ ಬರುವ ಅಂತ ಮನಸ್ಸಾಯ್ತು. ಉತ್ಸಾಹದಲ್ಲಿ ನಡೆದುಕೊಂಡು ಓಡಾಡುತ್ತಿದ್ದ ನನಗೆ ಸೂರ್ಯನ ಕೋಪಕ್ಕೆ ಉತ್ಸಾಹವೆಲ್ಲಾ ಕರಗಿ ಬೆವರಾಗಿ ಹರಿಯುತ್ತಿತ್ತು. ಆದರೂ ಒಂದೈದು ನಿಮಿಷ ಸುಧಾರಿಸಿಕೊಂಡು ಕಾಫೀ ತೋಟದ ಕಡೆಗೆ ಕಾಲಿಟ್ಟೆ.
ಮೇಲೆ ಹೋಗಿ ಅಂತ ಯಾಕೆ ಹೇಳಿದೆ ಅಂದ್ರೆ ಈ ಕಾಫೀ ತೋಟ ಇರೋದು ಮನೆಯ ಮೇಲೆ ಇದ್ದ ಒಂದು ಬೆಟ್ಟದ ಮೇಲೆ. ಕಾಫೀ ತೋಟಗಳನ್ನ ನೋಡಿದವರಿಗೆ ಇದು ಗೊತ್ತಿರಬಹುದು. ಕಾಫೀ ಗಿಡಗಳನ್ನ ಸಮತಟ್ಟಾದ ಜಾಗಗಳಲ್ಲಿ ಬೆಳೆಯುವುದಿಲ್ಲ. ನಮ್ಮ ಇಡೀ ಕಾಫೀ ತೋಟ ತಿರುಗಾಡಲು ಎರಡರಿಂದ ಮೂರು ಕಿ ಮೀ ನೆಡಿಯಬೇಕು. ದಟ್ಟವಾದ ಕಾಡುಗಳಿಗೆ ಹೊಂದಿಕೊಂಡಿರುವ ಕಾಫೀ ತೋಟಕ್ಕೆ ಕಾಡು ಪ್ರಾಣಿಗಳು ಬರುವುದು ಸರ್ವೇ ಸಾಮಾನ್ಯ. ನಮ್ಮ ಅಜ್ಜನ ಕಾಲದಲ್ಲಿ ಹುಲಿಗಳು ಹಸುಗಳನ್ನು ತಿನ್ನಲು ಮನೆಯವರೆಗೂ ಬರುತ್ತಿದ್ದವಂತೆ. ಆದರೆ ನನಗಂತೂ ಕಾಡು ಕೋಣ, ಕೋತಿಗಳು, ಹಾವುಗಳು ಬಿಟ್ಟರೆ ಇನ್ಯಾವ ಕಾಡು ಪ್ರಾಣಿಗಳು ಕಂದಿರೋದು ಕಮ್ಮೀನೇ. ಆಗಾಗ ಅಲ್ಲಿ ಇಲ್ಲಿ ಗರಿ ಬಿಚ್ಚಿದ ನವಿಲುಗಳನ್ನ ನೋಡಿದ ನೆನಪಿದೆ ಅಷ್ಟೇ. ಇವತ್ತಾದ್ರೂ ಏನಾದ್ರೂ ಸಿಗಬಹುದೇನೋ ನೋಡೋಣ ಅಂತ ನಿಧಾನವಾಗಿ ತೋಟಕ್ಕೆ ಹೋಗುವ ಕಾಲು ದಾರಿಯಲ್ಲಿ ಕಾಲಿಟ್ಟೆ.
ತೋಟಕ್ಕೆ ವಾಹನಗಳು ಓಡಾಡುವಷ್ಟು ದೊಡ್ಡ ರಸ್ತೆ ಇರ್ಲಿಲ್ಲ. ಮನುಷ್ಯರು ಓಡಾಡೋಕೆ ಅಂತ ಒಂದು ಚಿಕ್ಕ ಕಾಲು ದಾರಿ ಮಾಡಿದಾರೆ, ಅದರ ಅಕ್ಕಪಕ್ಕದಲ್ಲಿ ಮೊಣಕಾಲೆತ್ತರ ಬೆಳದಿರುವ ಹುಲ್ಲು. ಚಿಕ್ಕ ಪುಟ್ಟ ನಾಚಿಕೆ ಮುಳ್ಳಿನ ( ಮುಟ್ಟಿದರೆ ಮುನಿ) ಗಿಡಗಳು. ಚಿಕ್ಕ ವಯಸ್ಸಿನಲ್ಲಿ ಈ ಗಿಡದ ಜೊತೆ ಆಡುವ ಮಜಾನೇ ಬೇರೆ. ಈ ನಾಚಿಕೆ ಮುಳ್ಳಿನ ಗಿಡದ ಬಗ್ಗೆ ಗೊತ್ತಿದೆಯಲ್ಲ?? ಇದಕ್ಕೆ ಬೇರೆ ವಸ್ತುಗಳ ಸ್ಪರ್ಶ ಸ್ವಲ್ಪ ಆದಲ್ಲಿ, ಆಗ ತಾನೇ ಮದುವೆ ಆಗಿರುವ ಮಧುಮಗಳಿಗಿಂತ ಜೋರಾಗಿ ನಾಚಿಕೊಂಡು ತಮ್ಮ ಎಲೆಗಳನ್ನ ಮುಚ್ಚಿಕೊಳ್ತಾವೆ. ಚಿಕ್ಕವರಿಗೆ ಅದೇ ಒಂದು ಆಟ. ನೆಡೆದಾಡುವಾಗ ಸುಮ್ಮನೆ ಅವುಗಳಿಗೆ ತಾಗಿಸಿಕೊಂಡು, ಅವುಗಳ ಎಲೆಗಳನ್ನ ಬಲವಂತವಾಗಿ ಬಿಡಿಸಲು ಪ್ರಯತ್ನಿಸಿ ಹೀಗೆ ಹತ್ತು ಹಲವು ಚೇಷ್ಟೆಗಳು. ಸರಕ್ಕನೆ ನನ್ನ ಎದುರು ಹಾದು ಹೋಗಿತ್ತು ಒಂದು ಕಪ್ಪು ಬಣ್ಣದ ಹಾವು. ಕೇವಲ ಇನ್ನೆರಡು ಹೆಜ್ಜೆ ಇಟ್ಟಿದ್ದರೆ ಸೀದಾ ಅದರ ತಲೆಯ ಮೇಲೆ ಇಟ್ಟಿರುತ್ತಿದ್ದೆ ಕಾಲು. ಮಿನಿ ಹಾರ್ಟ್ ಅಟ್ಯಾಕ್ ಆದಂತೆ ಆ ಕ್ಷಣಕ್ಕೆ ಅಲ್ಲೇ ನಿಂತಿದ್ದ ನನಗೆ ವಾಸ್ತವದ ಅರಿವಾಗಲು ಒಂದೆರಡು ನಿಮಿಷ ಬೇಕಾಯ್ತು. ಜೋರಾಗಿ ಹೊಡೆದುಕೊಳ್ಳುತ್ತಿದ್ದ ಹೃದಯವನ್ನು ತಹಬದಿಗೆ ತಂದು ಮುಂದೆ ಹೆಜ್ಜೆ ಹಾಕಿದ್ದೆ.
ಹಾವುಗಳು ಎಂದ ತಕ್ಷಣ ಅಂತ ಭಯಪಡುವಂಥದ್ದೇನಿಲ್ಲಾ . ಅವುಗಳು ಬಿಸಿಲಿಗೆ ಬಂದು ಮೈ ಚಾಚಿ ಮಲಗುವುದು ಅಭ್ಯಾಸ. ಅದು ಅಲ್ಲದೆ ಎಲ್ಲಾ ಹಾವುಗಳು ವಿಷಕಾರಿ ಏನಲ್ಲಾ. ಅದರಲ್ಲೂ ಮಲೆನಾಡಿನಲ್ಲಿ ಕಾಲು ಕಾಲಿಗೆ ಸಿಗುವವು ಕೆರೆ ಹಾವುಗಳು. ಇವುಗಳಿಗೆ ವಿಷ ಇರಲ್ಲ ಆದರೂ ಬಾಲದಲ್ಲಿ ಹೊಡೆಯುತ್ತಾವೆ ಅಂತ ಕೇಳಿದೀನಿ ಆದ್ರೆ ನನಗೂ ಇದರ ಬಗ್ಗೆ ಇರುವ ಮಾಹಿತಿ ಕಮ್ಮಿ. ಕೆಲವೊಮ್ಮೆ ಹಾವುಗಳು ಮನೆಗಳಿಗೆ ಅತಿಥಿಗಳಾಗಿ ಬರುವುದುಂಟು. ಹೊರಗಡೆ ತಿನ್ನಲು ಸಿಗದಿದ್ದರೆ ಮನೆಯಲ್ಲಿ ಅಡಗಿರುವ ಇಲಿಗಳನ್ನು ಹಿಡಿಯಲು ಆಮಂತ್ರಣವಿಲ್ಲದೆ ಬರುವ ಅತಿಥಿಗಳಿವು . ಆದರೂ ನನಗೆ ಹಾವು ನೋಡಿದರೆ ಒಂದು ಸಲ ಮೈ ಜುಂ ಅನ್ನುತ್ತೆ. ತಮ್ಮ ದೇಹದಲ್ಲೇ ಸರ ಸರ ತೆವಳಿ ಹೋಗುವ ಹಾವನ್ನು ಕಂಡರೆ ರೌದ್ರಮಯ ದೃಶ್ಯವೊಂದನ್ನ ನೋಡಿದಂತಾಗುತ್ತೆ. ನನ್ನ ಸ್ನೇಹಿತ ಹೇಳಿದ್ದು ನೆನಪಾಯ್ತು ಅವನ ಗೆಳೆಯನೊಬ್ಬ ಸಿಟಿನಲ್ಲಿ ಬೆಳೆದವನು ಊರಿಗೆ ಬಂದಾಗ ಕೇಳಿದ್ದನಂತೆ "ಇದೇನಿದು ಹಾವುಗಳೆಲ್ಲಾ ಹೀಗೆ ಫ್ರೀ ಆಗಿ ಓಡಾಡ್ಕೊಂಡು ಇದಾವೆ?? " ಅಂತ. ಏನ್ ಮಾಡೋಣ ಮಾರೆಯಾ ಹಿಡಿದು ಮನೆಯಲ್ಲಿ ಸಾಕಿಕೊಳ್ಳೋಕೆ ಆಗಲ್ವಲ್ಲ ಅಂತ ಹೇಳಿದ್ದನಂತೆ. ಪಾಪ ಅವರಿಗೂ ಅರಿವಿರಲ್ಲ ಮಲೆನಾಡಿನ ಜೀವನ ಕಾಡಿನ ಜೀವನ ಅಂತ. ಕಾಡಿಗೆ ಹೊಂದಿಕೊಂಡೇ ಸಾಗುವ ಮಲೆನಾಡಿನ ಬಧುಕು ಅದ್ಭುತ ಅಂತ ಮನಸ್ಸಿನಲ್ಲೇ ಅಂದುಕೊಂಡು ಸುತ್ತಾ ಕಣ್ಣಾಯಿಸುತ್ತಿದ್ದೆ.
ನಮ್ಮ ತೋಟದಲ್ಲಿ ಇರದ ಮರಗಳಿರಲಿಲ್ಲ. ತೇಗ , ಬೀಟೆ, ಹೊನ್ನೆ, ಹಲಸು, ಮಾವು , ಶ್ರೀಗಂಧ ಹೀಗೆ ಹತ್ತು ಹಲವಾರು. ಒಮ್ಮೆ ಶ್ರೀಗಂಧದ ಕಳ್ಳರ ಕಾಟ ಜಾಸ್ತಿ ಅಂತ ಅಪ್ಪ ಆರಣ್ಯಾಧಿಕಾರಿಗಳಿಗೆ ಹೇಳಿ ತೋಟದ ಎಲ್ಲಾ ಗಂಧದ ಮರಗಳನ್ನ ಕಡಿಸಿ ಒಂದು ಟ್ರಕ್ ಲೋಡ್ ಗಂಧದ ಮರ ಸರ್ಕಾರಕ್ಕೆ ಕೊಟ್ಟಿದ್ದು ನೆನಪಾಯ್ತು. ಕೆಲವೊಮ್ಮೆ ಗಂಧದ ಗಿಡ ದೊಡ್ಡದು ಆಗೋಕೆ ಮುಂಚೇನೇ ಕಳ್ಳರು ದುಡ್ಡಿನ ಆಸೆಗೆ ಕಿತ್ತುಬಿಡೋರು. ಸಿಗುವ ಮೂರು ಕಾಸಿಗಾಗಿ ಮಲೆನಾಡಿನ ಸೌಂದರ್ಯವನ್ನೇ ಹಾಳು ಮಾಡ್ತಾ ಇದೀವಿ ಅನ್ನೋ ಅರಿವು ಅವರಿಗಿರಲಿಲ್ವೆ?? ಹೀಗೇ ಕಿತ್ತು ಕಿತ್ತು ಇಂದು ಶ್ರೀಗಂಧದ ಮರಗಳಿಗಾಗಿ ಹುಡುಕಾಡುವ ಪರಿಸ್ಥಿತಿಗೆ ಬಂದಿದೆ ಮಲೆನಾಡು. ಟಕ್ ಅಂತ ಕಾಲಿಗೆ ಏನೋ ತಗುಲಿದಾಗ ಬಗ್ಗಿ ನೋಡಿದ್ದೆ. ಧೂಪದ ಕಾಯಿ. ಹಾಗೇ ಸುತ್ತಾ ಕಣ್ಣು ಹಾಯಿಸಿದರೆ ಬೇಕಾದಷ್ಟು ಕಾಯಿಗಳು ಮರದಿಂದ ಉದುರಿ ಬಿದ್ದಿದ್ದವು. ಈ ಧೂಪದ ಕಾಯಿ ಗಟ್ಟಿಯಾಗಿರುವ ಕಪ್ಪು ಬಣ್ಣದ ಕಾಯಿ. ಬಿಸಿಲಿಗೆ ಒಣಗಿದರೆ ಕಂದು ಬಣ್ಣಕ್ಕೆ ತಿರುಗುವ ಕಾಯಿಗಳು ಆಕ್ರೋಡು( ವಾಲ್ನಟ್) ವನ್ನು ಹೋಲುತ್ತೆ. ಇದನ್ನು ಒಡೆದರೆ ಅದರೊಳಗೆ ಎರಡು ಚಿಕ್ಕ ಬೀಜಗಳು. ಅದರ ರುಚಿ ಆಹಾ ಮಹದಾನಂದ. ಕಾಯಿಗಳನ್ನ ನಿಧಾನವಾಗಿ ಕತ್ತಿಯಲ್ಲಿ ಎರಡು ಭಾಗ ಮಾಡಿ ಗುಂಡುಪಿನ್ ಅಥವಾ ಸೇಫ್ಟೀಪಿನ್ನಿಂದ ಅದರ ಬೀಜಗಳನ್ನ ತೆಗೆದು ತಿಂತಾ ಇದ್ವಿ. ಒಂದು ಮೂಟೆ ಧೂಪದ ಕಾಯಿಗಳನ್ನು ತಂದ್ರೆ ಒಂದು ಪ್ಲೇಟ್ ಬೀಜ ಸಿಗುತ್ತೆ ಅಷ್ಟೇ. ಹಸಿ ಧೂಪದ ಕಾಯಿಯ ಬೀಜಕ್ಕೆ ಸಕ್ಕರೆ ಸೇರಿಸಿ ತಿನ್ನುವ ಮಜಾನೇ ಬೇರೆ ಬಿಡಿ.
ಅಲ್ಲೇ ಇದ್ದ ಕಲ್ಲಿನ ಮೇಲೆ ಒಂದು ಒಣಗಿರುವ ಧೂಪದ ಕಾಯಿ ಒಡೆದು ಬೀಜ ಬಾಯಿಗೆ ಹಾಕಿಕೊಂಡು ಮುಂದೆ ನೆಡೆದೆ. ಸ್ವಲ್ಪ ದೂರದಲ್ಲೇ ಸಿಕ್ಕಿತ್ತು ಒಂದು ಚಿಕ್ಕ ಕೆರೆ. ಕೆರೆ ಅಂದ್ರೆ ನಮ್ಮ ಕಡೆ ತುಂಬಾ ಚಿಕ್ಕದಾದ, ನೀರನ್ನು ಅಗತ್ಯವಿದ್ದಾಗ ಶೇಕರಿಸಿಡಲು ಮಾಡುವ ಜಾಗ. ನಮ್ಮ ಕಡೆಯ ಕೆರೆಗಳನ್ನ ದೊಡ್ಡದಾದ ಹೊಂಡ ಅಂತ ಕರಿಯಬಹುದು. ಹೆಚ್ಚು ಕಮ್ಮಿ ನಮ್ಮ ಫೈವ್ ಸ್ಟಾರ್ ಹೋಟೆಲ್ನ ಸ್ವಿಮ್ಮಿಂಗ್ ಪೂಲ್ಗಳಷ್ಟು ದೊಡ್ಡದಿರ್ತಾವೆ ಅಂದ್ಕೋಳಿ. ನಮ್ಮ ಮನೆಗಳಿಗೆ ಬರುವ ಕುಡಿಯುವ ನೀರು, ತೋಟಗಳಿಗೆ ನೀರಾವರಿಯ ನೀರು ಎಲ್ಲವೂ ಈ ಕೆರೆಯ ನೀರೆ ಆಗಿತ್ತು. ಬೆಟ್ಟದ ಮೇಲೆಲ್ಲೋ ಹುಟ್ಟುವ ನೀರುವ ಇಲ್ಲಿ ಬಂದು ಶೇಕರಣೆಯಾಗಿ ನಂತರ ಕೆಳಗೆ ಹರಿಯುತ್ತಿತ್ತು. ತೋಟಗಾರಿಕೆಗೆ ನೀರು ಜಾಸ್ತಿ ಅವಶ್ಯಕತೆ ಇದ್ದಾಗ ಮಾತ್ರ ಆ ಕೆರೆಯ ಕಿಂಡಿಯನ್ನು ಮುಚ್ಚಿ ಜಾಸ್ತಿ ನೀರು ಶೇಕಾರಣೆಯಾದ ನಂತರ ಅದನ್ನ ಹರಿಯಲು ಬಿಟ್ಟು ಉಪಯೋಗಿಸುತ್ತಿದ್ದರು. ಈ ರೀತಿ ಕಿಂಡಿಯನ್ನ ಮುಚ್ಚುವ ಕೆಲಸಕ್ಕೆ ತೂಬು ಹಾಕೋದು ಅಂತ ಕರಿತಾ ಇದ್ರು. ಬೇಸಿಗೆ ಬಂದ್ರೆ ಕೆರೆಗೆ ತೂಬು ಹಾಕಿ ರಾತ್ರಿಯೆಲ್ಲಾ ನೀರು ಶೇಕಾರಣೆಯಾಗಲು ಬಿಟ್ಟು ಅದನ್ನ ಬೆಳಿಗ್ಗೆ ಕಪ್ಪು ಕಾಲುವೆಗಳಿಗೆ ಹರಿಸಿ ಅಥವಾ ಸ್ಪ್ರಿಂಕ್ಲರ್ ನಿಂದ ತೋಟಗಾರಿಕೆಗೆ ಬಳಸುತ್ತಿದ್ರು. ಒಟ್ಟಿನಲ್ಲಿ ಮಲೆನಾಡಿನ ಜನರ ಜೀವನದ ಜೀವಾಳ ಬೆಟ್ಟದಲ್ಲಿ ಹುಟ್ಟುವ, ಭೂಮಿಯಿಂದ ಪುಟಿಯುವ ನೀರು. ಇದನ್ನ ಒರತೆ ಅಂತಾರೆ. ಈ ರೀತು ಹುಟ್ಟುವ ಹತ್ತು ಹಲವಾರು ಒರತೆಗಳು ಒಟ್ಟಾಗಿ ಕಾಲುವೆಗಳಾಗಿ, ಕಾಲುವೆಗಳೆಲ್ಲಾ ಒಟ್ಟಾಗಿ ನದಿಯಾಗಿ ಹರಿದು ನಾಗರೀಕತೆಯ ಶ್ರಷ್ಟಿಗೆ ಕಾರಣವಾಗಿದೆ ಅನ್ನುವುದು ಬೇರೆ ಪ್ರಶ್ನೆ.
ಸ ಶೇ ಷ
ಪ್ರಿಯಾಂಕ್ ರಾವ್

No comments:
Post a Comment