ಮೈ ಮೇಲೆ ಹತ್ತುತ್ತಿದ್ದ ಜಿಗಣೆಗಳಿಗೆ ಲಿಂಬೆಹಣ್ಣು ತಾಗಿಸುತ್ತಾ(ಲಿಂಬೆಹಣ್ಣು ಹಾಗೂ ಉಪ್ಪು ನಿಮ್ಮನ್ನು ಜಿಗಣೆಗಳಿಂದ ಕಾಪಾಡೋಕೆ ಬಹಳ ಸಹಾಯಕಾರಿ) ಮುಂದೆ ಸಾಗುತ್ತಿದ್ದ ನಾನು ಯೋಚನಾ ಲಹರಿಯಲ್ಲಿ ಮುಳುಗಿದ್ದೆ. ಈ ಮನೆ ತೋಟ ಎಲ್ಲಾ ನಾನು ಹುಟ್ಟಿದಾಗಿನಿಂದ 16 ವರ್ಷದವರೆಗೂ ನನ್ನ ಜೀವನದ ಅವಿಭಾಜ್ಯ ಅಂಗಗಳಾಗಿದ್ದವು ಆದರೆ ಈಗ ಅದರ ಬಗ್ಗೆ ಒಲವು ತೋರಿಸಲು ಯಾರೂ ಇಲ್ಲದೆ ಸೊರಗಿ ಹೋಗಿವೆ. ನಮ್ಮ ತೋಟದಲ್ಲಿ ಇಲ್ಲದೆ ಇರುವ ಗಿಡಗಳು ತುಂಬಾ ಕಮ್ಮಿ . ಅಡಿಕೆ, ಕಾಫೀ , ಏಲಕ್ಕಿ, ಲವಂಗ, ಜಾಕಾಯಿ , ಸಪೋಟ , ದಾಲ್ಚಿನಿ , ನಿಂಬು , ಚಕ್ಕೋತ ಹೀಗೆ ಹೇಳ್ತಾ ಹೋದ್ರೆ ಮುಗಿಯದೆ ಇರೋವಷ್ಟು ಗಿಡಗಳು. ನಮ್ಮ ಅಪ್ಪ ಕೃಷಿ ಪ್ರಿಯ . ಅವರಿಗೆ ತೋಟ ಅಂದ್ರೆ ಪ್ರಾಣ ಆದರೆ ಕೆಲವೊಮ್ಮೆ ಜೀವನದಲ್ಲಿ ಎಲ್ಲಾನು ನಾವು ಅಂದುಕೊಂಡ ಹಾಗೆ ಆಗುವುದಿಲ್ಲ ನೋಡಿ. ನಾವು ಸುಂದರವಾದ ಊರು ಬಿಟ್ಟು ಜೀವನದ ಅನಿವಾರ್ಯತೆಗೆ ಬೆಂಗಳೂರು ಸೇರಿದೀವಿ. ಹಾಗೆ ತೋಟಕ್ಕೆ ಒಂದು ಸುತ್ತು ಬಂದು ನಮ್ಮ ಹಳೆಯ ಪ್ರೈಮರೀ ಸ್ಕೂಲ್ ಕಡೆ ಹೊರಟೆ.
ಊರಿನಲ್ಲಿರುವ ಎಲ್ಲಾ ಮಕ್ಕಳು ಓದ್ತಾ ಇದ್ದ ಶಾಲೆ ಇದು. ಸರ್ಕಾರಿ ಕಿರಿಯ ಪ್ರಾಥಮಿಕ ಪಾಟಶಾಲೆ. ನಾನು ಶಾಲೆಗೆ ಸೇರಿದಾಗ ಇದ್ದಿದ್ದು ಒಬ್ರು ಟೀಚರ್. ಅವ್ರು ಬಂದ್ರೆ ಮಾತ್ರ ಸ್ಕೂಲ್ ತೆರೀತಾ ಇದ್ರು ಇಲ್ಲಾಂದ್ರೆ ರಜೆ. ಈಗ ಆ ಸ್ಕೂಲ್ ಸಹಿತ ಮಕ್ಕಳಿಲ್ದೆ ಮುಚ್ಚೋ ಪರಿಸ್ಥಿತಿಗೆ ಬಂದಿದೆ. ಶಾಲೆಯ ಎದುರಿಗೆ ಇರುವ ಒಂದು ಚಿಕ್ಕ ಮೈದಾನ . ನಮ್ಮ ಊರಿನ ಎಲ್ಲಾ ಮಕ್ಕಳ ಬಾಲ್ಯಕ್ಕೆ ಹಾಗೂ ಅವರ ಚೇಷ್ಟೆಗಳಿಗೆ ಮೂಕಪ್ರೇಕ್ಷಕ ಆಗಿತ್ತು ಆ ಮೈದಾನ. ಹಾಗೇ ಸುತ್ತ ನೋಡಿದ್ರೆ ಏನೋ ಮಿಸ್ ಆದ ಹಾಗೆ ಅನ್ನಿಸ್ತು. ಶಾಲೆಗೂ ಮುನ್ನ ನಮ್ಮ ಚೇಷ್ಟೆಗಳನ್ನ ಸಹಿಸಿಕೊಂಡ ಇನ್ನೊಂದೆನೋ ಮಿಸ್ ಆಗ್ತಿದೆ ಅಂತ ಅನ್ನಿಸ್ತು. ಹಾಗೇ ಯೋಚಿಸಿದಾಗ ತಲೆಗೆ ಬಂದಿದ್ದು ಅಂಗನವಾಡಿ. ನಿಮ್ಮಲ್ಲಿ ಎಷ್ಟು ಜನಕ್ಕೆ ಅಂಗನವಾಡಿ ಅಂದ್ರೆ ಏನು ಅಂತ ಗೊತ್ತು?? ಸರ್ಕಾರದಿಂದ ನೆಡೆಸ್ತ ಇದ್ದ ಮೊನ್ತೆಸ್ಸೊರಿ. ಅದು. ಅಂಗನವಾಡಿಯಲ್ಲಿ ಕೊಡ್ತಾ ಇದ್ದ ಫುಡ್ ಗಾಗಿ ಅಲ್ಲಿ ಆಡಿಸೋ ಆಟಗಳಿಗಾಗಿ ಓಡೋಡಿ ಹೋಗ್ತಾ ಇದ್ವಿ. ಈಗ ಆ ಅಂಗನವಾಡಿ ಜಾಗದಲ್ಲಿ ಎರಡು ಖಾಲಿ ಮನೆಗಳಿವೆ. ಆ ಮನೆಗಳನ್ನ ಊರಿನವರು ಶಾಲೆಯ ಶಿಕ್ಷಕರಿಗಾಗಿ ಕಟ್ಟಿಸಿ ಕೊಟ್ಟಿರೋದು. ಯಾಕೆ ಅಂದರೆ ಬಸ್ ಸೌಲಭ್ಯ ಇಲ್ದೆ ಇರೋ ನಮ್ಮ ಊರಿಗೆ ಯಾವ ಶಿಕ್ಷಕರು ಬರೋಕೆ ತಯಾರಿರಲಿಲ್ಲ . ಊರಿನಲ್ಲಿ ಅವರಿಗೆ ಉಳಿದುಕೊಳ್ಳೋಕೆ ಯಾವುದೇ ವ್ಯವಸ್ತೆ ಇರಲಿಲ್ಲ . ಅದಿಕ್ಕೆ ಊರಿನವರೆಲ್ಲ ಸೇರಿ ಎರಡು ಮನೆ ಕಟ್ಟಿಸಿ ಅದನ್ನ ಶಿಕ್ಷಕರಿಗೆ ಕೊಟ್ಟಿದ್ರು. ಆದರೆ . ಈಗ ಯಾವ ಶಿಕ್ಷಕ ತಾನೇ ಮೂಲಭೂತ ಸೌಕರ್ಯಗಲಿಲ್ಲದಿರೊ ಈ ಹಳ್ಳಿಯಲ್ಲಿ ವಾಸ ಮಾಡೋಕೆ ಇಷ್ಟ ಪಡ್ತಾರೆ ಹೇಳಿ.
ಈಗಿನ ನಮ್ಮೊರಿನ ಪರಿಸ್ಥಿತಿಗೆ ಮನಸ್ಸಿನಲ್ಲೇ ವಿಷಾದಿಸುತ್ತ ವಾಪಸ್ ಮನೆ ಕಡೆಗೆ ಹೊರಟೆ. ಮನೆಯ ದಾರಿಯಲ್ಲಿಯೇ ಸಿಗುವ ಒಂದಿಬ್ಬರು ಪರಿಚಯದವರೊಡನೆ ಉಭಯಕುಶಲೋಪರಿ ಮಾತಾಡಿಕೊಂಡು ಮನೆಯ ಕಡೆ ಹೆಜ್ಜೆ ಹಾಕುತ್ತಿದ್ದೆ. ನಾವು ಮಿಡ್ಲ್ ಹೈ ಸ್ಕೂಲ್ ಹಾಗೂ ಹೈ ಸ್ಕೂಲ್ ಗೆ ಹೋಗೋವಾಗ ಪೋಸ್ಟ್‌ಮ್ಯಾನ್ ಕೆಲಸ ಮಾಡುತ್ತಿದ್ದ ನೆನಪು ಹಾಗೆಯೇ ನನ್ನ ಮನದಲ್ಲಿ ಸುಳಿಯಿತು.
ಮೊದಲೇ ಪ್ರಸ್ತಾಪಿಸಿರುವ ಹಾಗೆ ನಮ್ಮೋರಿಗೆ ಯಾವುದೇ ಬಸ್ ಸಂಚರವಿರಲಿಲ್ಲ. ಪಾಕದಲ್ಲೇ 5 ಕಿ ಮೀ ದೂರ ಇದ್ದ ಊರಿನಲ್ಲಿ ಇದ್ದ ಸರ್ಕಾರಿ ಮಿಡ್ಲ್ ಹೈ ಸ್ಕೂಲ್ ಹಾಗೂ ಹೈ ಸ್ಕೂಲ್ಗೆ ನೆಡೆದುಕೊಂಡು ಹೋಗಿ ಬರುವುದು ಅಭ್ಯಾಸ. ನ್ಯೂಸ್ ಪೇಪರ್, ದಿನಸಿ ಸಾಮಗ್ರಿಗಳು, ಪೋಸ್ಟ್ ಆಫೀಸ್, ಗ್ರಾಮ ಪಂಚಾಯಿತಿ ಎಲ್ಲವೂ ಇದ್ದದ್ದು ಆ ಊರಿನಲ್ಲೇ. ದಿನಾ ಶಾಲೆಗೆ ಹೋಗಿ ಬರುವಾಗ ದಾರಿಯಲ್ಲಿ ಸಿಗುವವರ ಮನೆಗೆ ಬೇಕಾದ ವಸ್ತುಗಳನ್ನು ತಂದು ಕೊಡೋದು ನಮ್ಮ ಕೆಲಸ. ಹ್ಹಾಗೆಯೇ ಆ ಊರಿನ ಪೋಸ್ಟ್ ಮ್ಯಾನ್ ಕೆಲಸ ಕೂಡ ಅರ್ಧ ಕಮ್ಮಿ ಮಾಡ್ತ ಇದ್ದೋರು ನಾವು. ಅವರ ಮನೆಗಳಲ್ಲಿ ಯಾವುದೇ ಚಿಕ್ಕ ಪೂಜೆ ಅಥವಾ ಫಂಕ್ಶನ್ ಆದ್ರೂ ಸಂಜೆ ಶಾಲೆ ಮುಗಿಸಿ ಬರುವಾಗ ಊಟಕ್ಕೆ ಬಾ ಆಯ್ತಾ ಅಂತ ಕರಿಯೋರು. ನಾವು ಅದೇ ಕುಶಿಯಲ್ಲಿ ಅವರ ಮನೆಗೆ ಬೇಕಾದ ಸಕ್ಕರೆ, ಸೀಮೆ ಎಣ್ಣೆ ಎಲ್ಲದನ್ನೂ ತಂದು, ಅವರ ಮನೆಯಲ್ಲಿ ಮಾಡಿರೋ ಕೇಸರಿಭಾತ್ ತಿಂದು ಮನೆ ಕಡೆ ಓಡ್ತಾ ಇದ್ವಿ. ಆದರೆ ಈಗ ಇರೋ ಮನೆಗಳಲ್ಲಿ ಅರ್ಧ ಮನೆಗಳು ಬೀಗ ಹಾಕಿವೆ. ಅರ್ಧ ಜನ ಜೀವನದ ಹುಡುಕಾಟದಲ್ಲಿ ಊರು ಬಿಟ್ಟು ಬೇರೆ ಊರು ಸೇರಿದ್ದಾರೆ. ಇಡೀ ಊರಿನಲ್ಲಿ ಸ್ಮಶಾನ ಮೌನ ಆವರಿಸಿದೆ. ಕೆಲವೊಮ್ಮೆ ನೋಡಿದರೆ ಊರು ವ್ರುದ್ದಾಶ್ರಮದ ಹಾಗೆ ಕಾಣುತ್ತೆ. ಯುವಕರೆಲ್ಲಾ ಊರು ತೊರೆದಿದ್ದಾರೆ. ಊರಿನಲ್ಲಿ ಇರುವವರಲ್ಲಿ ಬಹುಸಂಕ್ಯಾತರು ವೃದ್ದರೆ .
ಹೀಗೇ ತಲೆಯಲ್ಲಿ ಹಲವಾರು ಯೋಚನೆಗಳು ಭರದಿಂದ ಓಡ್ತಾ ಇದ್ವು. ಜನ ಊರು ಬಿಡೋಕೆ ಕಾರಣ ಏನು?? ನಾವು ಚಿಕ್ಕವರಿದ್ದಾಗ ಈ ಊರಿನ ಬಹುತೇಕ ಮನೆಗಳಿಗೆ ಕರೆಂಟ್ ಇಲ್ಲ, ಫೋನ್ ಇಲ್ಲ, ಆಸ್ಪತ್ರೆ ಇಲ್ಲ. ಹೀಗೇ ಮೂಲಭೂತ ಸೌಕರ್ಯಗಳಿಗೆ ಒದ್ದಾಡ್ತಾ ಇದ್ದ ಜನ ಕ್ರಮೇಣವಾಗಿ ಊರನ್ನ ತೋರಿತಾ ಬಂದ್ರು. ಹುಡುಗರೆಲ್ಲಾ ವಿದ್ಯೆಗಾಗಿ ಕೆಲಸಕ್ಕಾಗಿ ಊರು ಬಿಟ್ರು. ಒಂದು ಕಾಲದಲ್ಲಿ ಹಲವಾರು ಒಳ್ಳೆಯ ವಿಷಯಗಳಿಗೆ ಹೆಸರುವಾಸಿಯಾಗಿದ್ದ ಒಂದು ಮಲೆನಾಡಿನ ಹಳ್ಳಿ ಇಂದು ಸ್ಮಶಾನ ಮೌನ ಆವರಿಸಿರುವ , ಜನರೇ ಕಾಣದ ಒಂದು ನಿರ್ಭಿದ ಪ್ರಧೆಶವಾಗಿದೆ .
ಆಗ ಈ ಊರಿನಲ್ಲಿ ಕರೆಂಟ್ ಇದ್ದ ಮನೆಗಳು ಕೆಲವೇ ಕೆಲವು. ಟೀವೀ ಇದ್ದ ಮನೆ ಒಂದೋ ಎರಡೋ. ಟೀವೀ ಯಲ್ಲಿ ಬರುತ್ತಿದ್ದ ಚ್ಯಾನೆಲ್ ಒಂದೇ ಅದು ಡಿ ಡಿ ನ್ಯಾಶನಲ್. ಆ ಒಂದು ಚ್ಯಾನೆಲ್ನಲ್ಲಿ ಭಾನುವಾರ ಹಾಕ್ತಾ ಇದ್ದ ಫಿಲ್ಮ್ ನೋಡೋಕೆ ಊರಲ್ಲಿರೋ ಹುಡುಗರೆಲ್ಲ ಟೀವೀ ಇರೋರ ಮನೆಯಲ್ಲಿ ಸೇರ್ತಾ ಇದ್ವಿ . ಭಾನುವಾರ ಡಿ ಡಿ ನ್ಯಾಶನಲ್ ನಲ್ಲಿ ಸಂಜೆ 4 ಘಂಟೆಗೆ ಒಂದು ಸಿನಿಮಾ ಹಾಕ್ತಾರೆ ಗೊತ್ತಲ್ಲ?? ಆ ಸಿನಿಮಾ ಒಂದೇ ನೋಡೋಕೆ ಸಿಗ್ತಾ ಇದ್ದಿದ್ದು ನಮಗೆ. ಬೇರೇ ಸಮಯದಲ್ಲಿ ಮನರಂಜನೆ ಅಂದ್ರೆ ಆಟ , ರೇಡಿಯೋ ಹಾಗೂ ಇನ್ನೂ ಕೆಲವರ ಮನೆಯಲ್ಲಿ ಟೇಪ್ ರೆಕಾರ್ಡರ್ ಇತ್ತು. ಆದರೆ ಟೇಪ್ ರೆಕಾರ್ಡರ್ ಊರಿಗೆ ಬಂದಿದ್ದು ನಾನು ಹುಟ್ಟಿ ಒಂದು ಹತ್ತು ಹನ್ನೆರಡು ವರ್ಷಗಳ ನಂತರ ಅನ್ಸುತ್ತೆ. ಸಿನಿಮಾ ಇರಬಹುದು ಅಥವಾ ಕ್ರಿಕೆಟ್ ಮ್ಯಾಚ್ ಇರಬಹುದು ಎಲ್ಲದಕ್ಕೂ ಒಂದೇ ಮನೆ ಅದು ಟೀವೀ ಇರುವವರ ಮನೆ. ಅವರೂ ಏನು ಬೇಜಾರು ಮಾಡ್ಕೋತಾ ಇರಲಿಲ್ಲ. ಯಾಕೆಂದ್ರೆ ಅವರಿಗೂ ನೋಡೋಕೆ ಕಂಪನೀ ಸಿಗೋದು ಅಂತ. ಆದ್ರೆ ಇವೆಲ್ಲಾ ಮಾಡೋಕೆ ಆಗ್ತಾ ಇದ್ದಿದ್ದು ಕರೆಂಟ್ ಇದ್ರೆ ಮಾತ್ರ. ನಮ್ಮೊರಿನಲ್ಲಿ ಕರೆಂಟ್ ಇರೋದಕ್ಕಿಂತ ಇಲ್ದೆ ಇರುವ ಸಮಯಾನೇ ಜಾಸ್ತಿ.
ಆದರೆ ಒಂದಂತೂ ಸತ್ಯ ಕರೆಂಟ್ ಟೀವೀ ಯಾವ್ದು ಇಲ್ದೆ ನಾವು ಬೇಳ್ಡ್ವಿ. ಈಗ ಜೀವನದಲ್ಲಿ ಜ್ಞಾಪಿಸಿಕೊಳ್ಳೋಕೆ ಹಲವಾರು ವಿಷಯಗಳಿವೆ, ನೆನಪುಗಳಿವೆ, ಕಲಿತಿರೋ ಹಲವು ಪಾಟಗಳಿವೆ, ಕಷ್ಟದ ಅನುಭವಗಳಿವೆ, ನೆರೆ ಹೊರೆಯವರ ಪ್ರೀತಿಯ ಮಮಕಾರದ ಸವಿ ನೆನಪುಗಳಿವೆ, ಕಂಡ ಕನಸುಗಳ ಅರಿವಿದೆ, ಹಳ್ಳಿಯ ಮತ್ತು ದಿಲ್ಲಿಯ ಜೀವನದ ವೈತ್ಯಾಸದ ಪರಿವಿದೆ.
ಇನ್ನಷ್ಟು ವಿಷಯಗಳನ್ನ ಮತ್ತೆ ಬಿಚ್ಚಿಡ್ತೀನಿ. ಆಲಿವರೆಗೂ ಇದನ್ನ ಓದಿ, ಶೇರ್ ಮಾಡಿ, ಮಲೆನಾಡಿನ ಜೀವನದ ಅರಿವನ್ನ ಜನ ಸವಿಯಲೀ.
ಸ ಶೇ ಷ
No comments:
Post a Comment