Wednesday, 19 June 2013

ಧನಾತ್ಮಕ ಆಲೋಚನೆ  ( ಪಾಸಿಟಿವ್ ಥಿಂಕಿಂಗ್ ) ಅಂದ್ರೆ ಏನು ???
ಶಿರಸ್ತ್ರಾಣ ( ಹೆಲ್ಮೆಟ್) ಇಲ್ಲದೆ ಗಾಡಿ ಓಡಿಸುವಾಗ 5 ಅಡಿ (ಫೀಟ್)
ಅಂತರದಲ್ಲಿ ಆರಕ್ಷಕ ( ಪೋಲೀಸ್) ನಿಂತಿದ್ರು ಅವನು ನಮ್ಮನ್ನ ತಡೆಯೋಲ್ಲ  ಅಂತ ಯೋಚಿಸೋದಾ??
ಅಥವಾ ತರಗತಿಯಿಂದ (ಕ್ಲಾಸ್) ಪರಾರಿಯಾಗಿ (ಬಂಕ್ ಮಾಡಿ) ಹೋಗುವಾಗ ಪ್ರಾಚಾರ್ಯರು  ( ಪ್ರಿನ್ಸಿಪಲ್)  ಎದುರಿಗೆ ಸಿಕ್ಕಿದ್ರೂನೂ ಏನು
ಮಾಡೊಲ್ಲಾ ಅನ್ನೋ ನಂಬಿಕೇನ ??
ಅಥವಾ ರೈಲು ಹಳಿ ಮೇಲೆ ನಿಂತು ದೇವರು ನನ್ನ ಕಾಪಾಡ್ತಾನೆ ಅಂತ ನಂಬಿಕೊಳ್ಳುವುದ??
ಹೀಗೆ ಧನಾತ್ಮಕ ಆಲೋಚನೆ ಬಗ್ಗೆ ತುಂಬಾ ಉದಾಹರಣೆಗಳು, ವಿಶ್ಲೇಷಣೆಗಳು ಕೊಡಬಹುದು. ಆದರೆ ನಿಜವಾಗ್ಲೂ ಧನಾತ್ಮಕ ಆಲೋಚನೆ
ಮಾಡುವವರು ಎಷ್ಟು  ಜನ ?? ಯಾವುದನ್ನ ಧನಾತ್ಮಕ ಆಲೋಚನೆ  ಹಾಗೂ ಯಾವುದನ್ನ ಗಾಢನಂಬಿಕೆ ( ಓವರ್ ಕಾನ್ಫಿಡೆನ್ಸ್) ಅಂತ
ಕರಿಬಹುದು?? ಪ್ರಾಯಶಃ ಇದಕ್ಕೆ ಉತ್ತರ ಕೊಡುವವರು ತುಂಬಾ ಕಡಿಮೆ.
ಈಗ ಈ ಬರವಣಿಗೆ ಮುಂದೆ ತುಂಬಾ ಆಸಕ್ತಿಯುತವಾಗಿರುತ್ತೆ ಅಂತ ಯೋಚಿಸೋದು ಧನಾತ್ಮಕ ಆಲೋಚನೆಯೂ ಆಗಬಹುದು ಅಥವಾ
ಗಾಢನಂಬಿಕೆಯೂ ಆಗಬಹುದು.  ಹೀಗೆ ಪ್ರತಿಯೊಂದು ಆಲೋಚನೆಯನ್ನು ಬೇರೆ ಬೇರೆ ವರ್ಗಗಳಿಗೆ ಸೇರಿಸಬಹುದು.

ಜೇವನದಲ್ಲಿ ಹುಡುಗಿ/ ಹುಡುಗ ಕೈ ಕೊಟ್ಟಾಗ, ದುಡ್ಡಿಗೆ ತೊಂದರೆ ಇದ್ದಾಗ, ಕೆಲಸ ಸಿಗದೆ ಇದ್ದಾಗ , ಕೌಟುಂಬಿಕ ಕಲಹ ಇದ್ದಾಗ ಸ್ನೇಹಿತರು
ಧನಾತ್ಮಕ ಆಲೋಚನೆ ಬಗ್ಗೆ ಮಾತಾಡೋದು ಸಹಜ, ಆದರೆ ಅದೇ ತೊಂದರೆ ಅವರಿಗೆ ಬಂದಾಗ ಅವರಿಗೆ ಧನಾತ್ಮಕ ಆಲೋಚನೆ ಯಾಕೆ
ಬರುವುದಿಲ್ಲ??? ಹಾಗಾದರೆ ಧನಾತ್ಮಕ ಆಲೋಚನೆ ಬರೇ ಬಾಯಲ್ಲಿ ಹೇಳಲು ಮಾತ್ರಾನಾ ??  ಧನಾತ್ಮಕ ಆಲೋಚನೆಯಿಂದ ಬದುಕುವವರು
ಯಾರಾದ್ರೂ ಇದ್ದಾರಾ??  ನಿರುದ್ಯೋಗಿಗೆ ಉದ್ಯೋಗದ ಭರವಸೆ ನೀಡುವ ಆಲೋಚನೆ ಯಾವುದು?? ಹೀಗೆ ಚರ್ಚಾಸ್ಪದವಾಗಿ ಸಾಗುವ ಈ ವಿಷಯದ ಬಗ್ಗೆ ದಿನವಿಡೀ ಚರ್ಚೆ ಮಾಡಿದರೂ ಮುಗಿಯುವುದಿಲ್ಲ.

ರಾಮಾಯಣದಲ್ಲಿ ರಾವಣ ಸೀತೆಯನ್ನು ಅಪಹರಿಸುವ ಯೋಚನೆ ಮಾಡಿದ್ದಾಗ ಅದು ಧನಾತ್ಮಕ ಯೋಚನೆ ಆಗಿತ್ತ?? ಆತನಿಗದ್ದ ಶಿವನ ಒಲುಮೆ ಆತನನ್ನು ಹಾಗೆ ಪ್ರೇರೇಪಿಸಿತ?? ಅದು ಆತನಿಗೆ ಯಶಸ್ಸು ತಂದುಕೊಟ್ಟಿದರೆ ಅದನ್ನು ಧನಾತ್ಮಕ ಆಲೋಚನೆ ಎಂದು ಹೇಳಬಹುದಿತ್ತಾ ?? ಅವನ ಸಾವಿಗೆ ಕಾರಣವಾದ ಅದೇ ಯೋಚನೆಯನ್ನು ನಾವು ಮೂಢನಂಬಿಕೆ ಅಥವಾ ದುರಹಂಕಾರ ಎಂದು ಹೇಳ್ತೀವಾ ?? ಹಾಗಾದರೆ ಮನುಷ್ಯನಿಗೆ ಯಶಸ್ಸು ತಂದುಕೊಡುವ ಆಲೋಚನೆಯನ್ನು ಮಾತ್ರ ಸಮಾಜ ಧನಾತ್ಮಕ ಆಲೋಚನೆ ಎಂದು ಕರೆಯುತ್ತಾ?? ಒಬ್ಬ ಸಾಮಾನ್ಯ ಮನುಷ್ಯನಾಗಿ ಧನಾತ್ಮಕ ಆಲೋಚನೆ ಹಾಗೂ ದುರಹಂಕಾರ ಅಥವಾ ಗಾಢನಂಬಿಕೆ ಮಧ್ಯೆ ವ್ಯತ್ಯಾಸ ತಿಳಿದುಕೊಳ್ಳುವುದು ಹೇಗೆ ?? ಹೀಗೆ ಯೋಚ್ನೆ ಮಾಡ್ತಾ ಮಾಡ್ತಾ ಕೊನೆಗೂ ತೀರ್ಮಾನ ಕೊಡೋಕೆ ಆಗ್ದೇ ಇರೋ ಚರ್ಚೆ ಆಗಿ ಉಳಿದುಬಿಡುತ್ತೆ ಈ ವಿಷಯ.


ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಏರೀಸುವ ಈ ವಿಷಯ ಕೆಲವೊಮ್ಮೆ ತುಂಬಾ ಸರಳವಾಗಿ ಕಾಣಿಸುತ್ತೆ.  ಸಂಬಧ ಕಡಿದುಕೊಂಡ ವ್ಯಕ್ತಿ ಹೊಸ ಸಂಗಾತಿಯನ್ನು ಆಶಿಸುವುದು , ವ್ಯವಹಾರ ( ಬುಸಿನೆಸ್ಸ್ ) ದಲ್ಲಿ ಪ್ರಗತಿಯನ್ನು ಬಯಸುವುದು , ಪರೀಕ್ಷೆಯಲ್ಲಿ ಉತ್ತಮ್ಮ ಅಂಕಗಳನ್ನು ಬಯಸುವುದು ( ಓದಿದ ನಂತರ) ಮತ್ತು ಮನೆಯಲ್ಲಿ  ಹೆಂಡತಿ ಜಗಳ ಮಾಡದೆ ಇರುವುದನ್ನು ಬಯಸುವುದು ಹೀಗೆ ನಿಮ್ಮ ಆರಾಮ ವಲಯದಲ್ಲಿ ( ಕಂಫರ್ಟ್ ಜ಼ೋನ್ ) ಒಳ್ಳೆಯ ಸಂಗತಿಗಳನ್ನು ಬಯಸುವುದನ್ನು ಧನಾತ್ಮಕ ಯೋಚನೆ ಎಂದು ಹೇಳಬಹುದು. ಆದ್ರೂ ಕೂಡ ಈ ಧನಾತ್ಮಕ ಯೋಚನೆಗಳು ಯಾವಾಗ್ಲೂ ಸತ್ಯ ಆಗುತ್ತೆ ಅಂತ ಹೇಳೋಕೆ ಆಗಲ್ಲ .
 ಧನಾತ್ಮಕ ಯೋಚನೆಗಳು ಬುಡವಿಲ್ಲದ ( ಬೇಸ್ಲೆಸ್)  ವಾದ ಅಥವಾ ಚರ್ಚೆ ಅಂಥ  ಅನ್ಸುದ್ರೂ  ಎಲ್ಲೋ ಒಂದು ಕಡೆ ಒಬ್ಬ ಭಿಕ್ಷುಕನಿಗೆ, ನಿರುದ್ಯೋಗಿಗೆ, ಭಗ್ನ ಪ್ರೇಮಿಗೆ, ವಿಧವೆಗೆ ಮತ್ತು ಹಲವು ಭಾವನಾತ್ಮಕ ಜೀವಿಗಳಿಗೆ ಜೀವ ತುಂಬುವ ಔಷಧ ಅಂತ ಅನ್ಸುತ್ತೆ.  ನಮ್ಮ ಸ್ನೇಹಿತರು ಧನಾತ್ಮಕ ಚಿಂತನೆ ಬಗ್ಗೆ ಮಾತು ಆಡಿದಾಗ ಎಲ್ಲೋ ಒಂದು ಕಡೆ ಅದು ನಮ್ಮಲ್ಲಿ ಸ್ಪೂರ್ತಿ ತುಂಬ್ತಾ ಇದೆ ಅಂತ ಅನ್ಸುತ್ತೆ.  ಇಂದಿಗೂ ಈ ಜಗತ್ತಿನಲ್ಲಿ ಎಷ್ಟೊಂದು ಆತ್ಮಹತ್ಯೆಗಳು ತಪ್ಪಿಹೋಗ್ತಾ
ಇರೋದು ಧನಾತ್ಮಕ ಆಲೋಚನೆಯಿಂಧ ಅಂತ ಅನ್ಸುತ್ತೆ. 

ಹೀಗೆ ಎಷ್ಟೊಂದು ಮದ್ಯಸಾರ ಪಂಡಿತರು ಹಾಗೂ ಮಾನೋತಜ್ಞರು ಹೇಳುವ ಹಾಗೆ ನಾವು ಕೂಡ ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡದೆ ಧನಾತ್ಮಕ ಆಲೋಚನೆಯನ್ನು ನಂಬಬೇಕಾಗಿದೆ . ಈಗಿರುವ ಜೀವನ ವಿಧಾನ ಹಾಗೂ ಒತ್ತಡಗಳಿಗೆ ಧನಾತ್ಮಕ ಆಲೋಚನೆ  ಒಂದೇ ಆತನನ್ನು ಹುಚನನ್ನಾಗಿ ಮಾಡದೆ ತಡೆಯಬಹ್ದು ಎನ್ನುವುದು ನನ್ನ ಭಾವನೆ. ಯಾವುದು ಧನಾತ್ಮಕ ಆಲೋಚನೆ ಹಾಗೂ ಯಾವುದು ಅಲ್ಲ ಅನ್ನುವ ತೀರ್ಮಾನ ನಿಮಗೆ ಬಿಟ್ಟಿದ್ದು .  ಈಗ ನನ್ನ ಧನಾತ್ಮಕ ಆಲೋಚನೆ ಏನಂದ್ರೆ ಈ ಬರವಣಿಗೆಯನ್ನು ಜನ ಮೆಚ್ತಾರೆ , ಠೀಕೆ ಮಾಡುವವ್ರು ಮುಂದಿನ ಒಳ್ಳೆ ಭರವಣಿಗೆಗೆ ಸಲಹೆಗಳನ್ನು ಕೊಡ್ತಾರೆ ಅನ್ನೋದು.

ಒಂದು ಮನವಿ
ಬರವಣಿಗೆಯಲ್ಲಿ ಇದು ನನ್ನ ಮೊದಲನೇ ಪ್ರಯೋಗ. ಯಾವುದೇ ತಪ್ಪಿದ್ದರೆ ದಯವಿಟ್ಟು ಮನ್ನಿಸಿ. ಬೆಂಗಳೂರು ಕನ್ನಡಿಗರಿಗೆ ಸಹಾಯವಾಗಲು ಕ್ಲಿಷ್ಟಕರ ಪದಗಳಿಗೆ ಆಂಗ್ಲ ಭಾಷೆಯ ಅರ್ಥವನ್ನು  ಕೊಡಲು ಪ್ರಯತ್ನಿಸಿದ್ದೇನೆ. ಬರವಣಿಗೆಯನ್ನು  ಸುಧಾರಿಸುವ ಯಾವುದೇ ಸಲಹೆ ನಿಮ್ಮಲ್ಲಿ ಇದ್ದರೆ ದಯವಿಟ್ಟು ನೀಡಿ.

ಪ್ರಿಯಾಂಕ್ ರಾವ್ 










6 comments:

  1. Very gud attempt..Keep writing.. Jai karnataka...

    ReplyDelete
  2. thumba chanda ide kanappa :P (Chethan Sarvotham)

    ReplyDelete
  3. ನನಗನ್ನಿಸಿದ್ದು..

    ನೀ ಅಂದ್ಕೊಂಡಿರೋ "ಪಾಸಿಟಿವ್ ಥಿಂಕಿಂಗ್" ಪಾಸಿಟಿವ್ ಥಿಂಕಿಂಗ್ ಅಲ್ಲ ಅನ್ಸುತ್ತೆ :P

    ಈಗ ಉದಾಹರಣೆಗೆ, ಊರಿಗೆ ಹೋಗಕ್ಕೆ ಹತ್ತು ಗಂಟೆಗೆ ಟಿಕೆಟ್ ಬುಕ್ ಮಾಡಿದೀಯ ಅಂದ್ಕೊ..
    99% ಬಸ್ ಬರುತ್ತೆ. ನಿನ್ನ ಯೋಚನೆಗಳು ಹೀಗಿರಬಹುದು.
    1. 10 ಗಂಟೆಗೆ ಬಸ್ಸು ಬರುತ್ತಲ್ಲ, ಬೆಳಗ್ಗೆ 5 ಗಂಟೆಗೆ ಊರಲ್ಲಿ ಇರ್ತೀನಿ, ಫ್ರೆಂಡ್ಸ್ ಗೆ 8 ಗಂಟೆಗೆ ಸಿಗೋಕೆ ಹೇಳಿದ್ರಾಯ್ತು.
    2. 10 ಗಂಟೆ ಬಸ್ಸು ಲೇಟಾಗಿ ಬಂದ್ರೆ ಏನು ಮಾಡೋದು.
    3. ಇವತ್ತು ಬಸ್ ಬರುತ್ತೋ ಇಲ್ಲವೋ..
    4. ಐರಾವತ ಬಸ್ಸು ತುಂಬಾ clean ಆಗಿ maintain ಮಾಡಿರ್ತಾರೆ.
    5. ಬಸ್ಸು ಚೆನ್ನಾಗಿಲ್ಲದಿದ್ರೆ ಏನು ಮಾಡೋದು..

    ಪಾಸಿಟೀವ್ ಅಥವಾ ನೆಗಟೀವ್ ಎರಡೂ ಹಿಂದೆ ತಿಳಿದ ಮಾಹಿತಿಯ ಮೇಲೆ ಆದರಿಸಿರುತ್ತೆ ಅಂತ ಅಂದ್ಕೊಂಡಿದೀನಿ, ಮೇಲಿನ ಲಿಸ್ಟ್ ನಲ್ಲಿ ಪಾಸಿಟೀವ್ ಮತ್ತು ನೆಗೆಟೀವ್ ಎರಡೂ ಇದೆ. confidence is based on previous experience/work.

    ಆದರೆ ಟಿಕೇಟ್ ನೇ ಬುಕ್ ಮಾಡದೇ 10 ಗಂಟೆ ಬಸ್ ಅಲ್ಲಿ ಟಿಕೆಟ್ ಸಿಗುತ್ತೆ ಬಿಡು ಅಂದ್ಕೊಳ್ಳೋದನ್ನ ಪಾಸಿಟೀವ್ ಥಿಂಕಿಂಗ್ ಅಂತ ಕರೆಯೋಕೆ ಆಗುತ್ತಾ?

    ReplyDelete
    Replies
    1. illa neenu heliddu correct!! adikke naanu mele mention maadideeni nodu!
      ನಿಮ್ಮ ಆರಾಮ ವಲಯದಲ್ಲಿ ( ಕಂಫರ್ಟ್ ಜ಼ೋನ್ ) ಒಳ್ಳೆಯ ಸಂಗತಿಗಳನ್ನು ಬಯಸುವುದನ್ನು ಧನಾತ್ಮಕ ಯೋಚನೆ ಎಂದು ಹೇಳಬಹುದು.
      :) :)

      Delete