ಕೊನೆಗೂ ಮನೆ ರೀಚ್ ಆದ್ವಿ. ಗಾಡಿಯಿಂದ ಇಳಿದು ಗೇಟ್ ತೆಗೆದು ಒಳಗೆ ಕಾಲಿಡ್ತಾ ಇದ್ದಂತೆ ಸ್ವಾಗತಿಸೋಕೆ ಬಂದ್ವು ಶ್ವಾನಗಳು . ಜೋರಾಗಿ ಬೊಗಳುತ್ತಾ ಬಂದ ನಾಯಿಗಳು ನನ್ನನು ಮೂಸಿ ನೋಡಿ ಬಹಳ ವರ್ಷಗಳಿಂದ ಮುಖ ಪರಿಚಯ ಇರೋ ತರ ಬಾಲ ಅಲ್ಲಾಡ್ಸಿ ಮೈ ಮೇಲೆ ಹಾರೋಕೆ ಶುರು ಮಾಡಿದವು.ವಿಶ್ವಾಸಕ್ಕೆ ನಾಯಿ ಅನ್ನೋ ಮಾತು ಸುಳ್ಳಲ್ಲ ನೋಡಿ . ಒಂದೇ ಒಂದು ಪೀಸ್ ರೊಟ್ಟಿ ಕೊಟ್ಟವನನ್ನು ಸಾಯೋವರೆಗೂ ನೆನಪಿನಲ್ಲಿ ಇಟ್ಟುಕೊಳ್ಳೋ ನಾಯಿ ನಿಜವಾಗ್ಲೂ ಮನುಷ್ಯನ ಸ್ನೇಹಿತ ಅನ್ನೋ ಮಾತು ಸುಳ್ಳಲ್ಲ . ಅತಿಥಿಯನ್ನ ಕಂಡ ಸಂತೋಷವನ್ನ ತಡೆಹಿಡಿಯೋಕೆ ಆಗದೆ ಅಲ್ಲಿ ಇಲ್ಲಿ ಓಡಾಡಿ , ಮೈ ಮೇಲೆ ಹಾರಿ ಸ್ವಲ್ಪ ನನ್ನ ಜೀನ್ಸ್ ನಾ ಕೊಳೆ ಮಾಡಿ , ಅಲ್ಲಾಡ್ತಾ ಇರೋ ಬಾಲಾನ ಕಂಟ್ರೋಲ್ ಗೆ ತರೋಕೆ ಟ್ರೈ ಮಾಡ್ತ ಇದ್ವು . ಸ್ವಲ್ಪ ಮುದ್ದಾಡಿ ಮನೆಗೆ ಎಂಟ್ರೀ ಕೊಟ್ಟೆ .ದೊಡ್ಡಪ್ಪ ನಾ ಹತ್ರ ಸ್ವಲ್ಪ ಮಾತಾಡಿ , ನನ್ನನ್ನು ಅಪ್ಪಿಕೊಳಲ್ಲೂ ಕಾಯ್ತಾ ಇದ್ದ ನಿದ್ರಾದೇವಿಗೆ ಶರಣಾಗಿ ನಿದ್ರೆಗೆ ಜಾರಿದೆ.
ಸ್ಕೂಲ್ ಗೆ ರೆಡೀ ಆಗ್ತಾ ಇದ್ದ ಮಕ್ಕಳ ಕೂಗು ನನ್ನನ್ನ ನಿದ್ದೆಯಿಂದ ಎಬ್ಬಿಸುವಲ್ಲಿ ಯಶಸ್ವಿಯಾಗಿತ್ತು. ಮತ್ತೆ ಆವರಿಸುತ್ತಿದ್ದ ನಿದ್ರಾದೇವಿಯನ್ನು ಬದಿಗೊತ್ತಿ ಮೇಲೆ ಎದ್ದು ಮುಖ ತೊಳ್ಕೊಂಡು ಕಾಫೀ ಕುಡಿಯೋಕೆ ರೆಡೀ ಆದೆ . ಸಮಯ ಬೆಳಿಗ್ಗೆ 8:30 , ಸದ್ಯಕ್ಕೆ ಸುರಿತ ಇದ್ದ ಮಳೆರಾಯನಿಗೆ ಸ್ವಲ್ಪ ದಣಿವಾಗಿ ಮಳೆಯನ್ನು ನಿಲ್ಲಿಸಿದ್ದ ಅನ್ಸುತ್ತೆ. ಕಾರ್ಮೋಡಗಳು ಬದಿಗೆ ಸರಿದು ಸೂರ್ಯನ ಕಿರಣಗಳಿಗೆ ಭೂಮಿತಾಯಿಗೆ ಮುತ್ತಿಕ್ಕಲು ಅನುಕೂಲ ಮಾಡೋಕೊಡ್ತಾ ಇದ್ವು . ಮನೆ ಸುತ್ತಾ
ಬೆಟ್ಟಗಳು ಇರುವುದರಿಂದ ಸೂರ್ಯನ ಕಿರಣಗಳು ಸ್ವಲ್ಪ ತಡವಾಗೆ ಬರ್ತಾವೆ . ಕಾಫೀ ಗ್ಲಾಸ್ ಹಿಡ್ಕೊಂಡು ಹಾಗೆ ಆಚೆ ಬಂದು ಬಿಸಿಲಿಗಾಗಿ ಕಾಯ್ತಾ ಇದ್ದೇ. ಮನೆ ಸುತ್ತಾ ಅಡಿಕೆ ಮತ್ತು ಕಾಫೀ ತೋಟ . ಮನೆ ಪಕ್ಕದಲ್ಲಿ ಚಿಕ್ಕದಾದ ಹೂವು ಮತ್ತು ತರಕಾರಿಯ ತೋಟ. ಹೂವು ಮತ್ತು ಗಿಡಗಳ ಮೇಲಿದ್ದ ಮಳೆಯ ಹನಿಗಳು ಅವುಗಳ ಸೌಂದರ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿ ಆಗಿದ್‌ವು . ನಿಜವಾಗ್ಲೂ ಯಾವ್ದಾದ್ರೂ ಹುಡ್ಗಿಗೆ ಪ್ರಪೋಸ್ ಮಾಡ್ಬೇಕಂದ್ರೆ ಇಲ್ಲಿಗೆ ಕರೆದುಕೊಂಡು
ಬಂದು ಮಾಡ್ಬೇಕು, ಈ ಪ್ರಕೃತಿ ಸೌಂದರ್ಯದ ಮದ್ಯದಲ್ಲಿ ಯಾವ ಹೆಣ್ಣು ತಾನೇ ಇಷ್ಟ ಇಲ್ಲ ಅಂತ ಹೇಳೋಕೆ ಸಾದ್ಯ ಅಂದುಕೊಂಡೆ . ನಿಧಾನವಾಗಿ ಸೂರ್ಯನ ಕಿರಣಗಳು ಭೂಮಿಗೆ ತಾಕೋಕೆ ಶುರುವಾಯ್ತು . ಹೂವುಗಳ ಮೇಲಿದ್ದ ಮಳೆಯ ಹನಿಗಳು ಸೂರ್ಯನ ಕಿರಣಗಳು ಬಿದ್ದು ಹೊಳೆಯುವ ಮುತ್ತುಗಳ ಹಾಗೆ ಕಾಣಿಸ್ತಾ ಇದ್ದವು . ಆ ಸೌಂದರ್ಯವನ್ನು ಮತ್ತು ಕೈಯಲ್ಲಿ ಇದ್ದ ಕಾಫೀನಾ ಸವಿಯುತ್ತಾ , ಭೂಮಿ ಸ್ಪರ್ಶಿಸುತ್ತಿದ್ದ ಆ ಸೂರ್ಯನ ಕಿರಣಗಳಿಗೆ ಬೆನ್ನೊಡ್ಡಿ ಮೈ ಕಾಯಿಸಿಕೊಳ್ಳೋಕೆ ಶುರು ಮಾಡಿದೆ.
ತಿಂಡಿಗೆ ಬಾರೋ ಅನ್ನೋ ನಮ್ಮ ದೊಡ್ಡಮ್ಮನ ಕೂಗನ್ನು ಕೇಳಿ ನಿಧಾನವಾಗಿ ಒಳಗಡೆ ಚಲಿಸಿದೆ. ಮಲೆನಾಡು ಸ್ಟೈಲ್ ನಲ್ಲಿ ನೆಲದ ಮೇಲೆ ತಟ್ಟೆ ಇಟ್ಟು ಮಣೆ ಮತ್ತು ಚಾಪೆಗಳನ್ನ ಹಾಕಿದ್ರು . ಅಬ್ಬಾ ಎಷ್ಟೊಂದ್ ದಿನ ಆಗಿತ್ತು ಈ ತರ ತಿಂಡಿಗೆ ಕೂತು ಅದು ಎಲ್ಲಾರ ಜೊತೆ ಅಂದುಕೊಂಡೆ . ನಾವು ಬೆಂಗಳೂರಿನಲ್ಲಿ ಎಲ್ಲಿಗೋ ಹೋಗೋ ಆತುರದಲ್ಲಿ ಎರಡು ಇಡ್ಲಿನೋ ಇಲ್ಲ ಉಪ್ಪಿಟ್ಟನ ಹಾಗೆ ಗುಳುಂ ಅಂತ ನುಂಗಿ ಓಡ್ತಾ ಇರ್ತೀವಿ. " ನಿನ್ನೆ ಪತ್ರೊಡೆ ಮಾಡಿದ್ದೆ ಸ್ವಲ್ಪ ಹಾಕ್ಲಾ" ಅಂದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು . ಪತ್ರೊಡೆ ಅನ್ನೋದು ಮಲೆನಾಡಿನಲ್ಲಿ ಮರಗೆಸುವಿನಿಂದ ಮಾಡುವ ಒಂದು ಖಾರದ ಪದಾರ್ಥ. ಮಳೆಗಾಲದಲ್ಲಿ ಎಲ್ಲರ ಮನೆಯಲ್ಲೂ ಒಮ್ಮೆಯಾದರೂ ತಯಾರಾಗುವ ಈ ಪದಾರ್ಥ ತುಂಬಾ ಫೇಮಸ್ ಅಲ್ಲಿ. ಈ ಥರ ತುಂಬಾ ಪದಾರ್ಥಗಳಿವೆ , ಎಳೆ ಬಿದಿರಿನಿಂದ ಮಾಡುವ ಪಲ್ಯ ಮತ್ತು ಹುಳಿ , ಹಲಸಿನಹಣ್ಣಿನ ಕೊಟ್ಟೆ ಕಡುಬು , ಹಲಸಿನ ಕಾಯಿ ಹಪ್ಪಳ , ಶಾವಿಗೆ ಮತ್ತು ಕಾಯಿ ಹಾಲು , ಬೆಂಕಿಯಲ್ಲಿ ಸುಟ್ಟ ಹಲಸಿನ ಬೀಜಗಳು ಹೀಗೆ ಹೇಳ್ತಾ ಹೋದರೆ ಬಾಯಲ್ಲಿ ನೀರೂರುತ್ತಾ ಹೋಗುತ್ತೆ . ಹಾಕಿದ್ದ ಪತ್ರೊಡೆಯನ್ನು ಮೆಲ್ಲುತ್ತ " ದೊಡ್ಡಮ್ಮ ಗಂಜಿ ಇದೀಯ" ಅಂತ ಕೇಳಿದೆ .
" ಪರ್ವಾಗಿಲ್ವೆ ಬೆಂಗಳೂರಿನಲ್ಲಿ ಇದ್ರೂನೂ ಇನ್ನ ಗಂಜಿ ತಿನ್ನೋ ಅಭ್ಯಾಸ ಬಿಟ್ಟಿಲ್ವೆ " ಅಂದ್ರು. ನಿಮಗೇನು ಗೊತ್ತು ಅದರ ಮಜಾ ಅಂತ ಹೇಳೋಣ ಅನ್ನಿಸ್ತಿತ್ತು .ಅಕ್ಕಿನಾ ಸ್ವಲ್ಪ ಜಾಸ್ತಿ ನೀರು ಹಾಕಿ , ತುಂಬಾ ಹೊತ್ತು ಬೇಯಿಸಿದರೆ ನಿಮ್ಮ ಗಂಜಿ ರೆಡೀ ಆಗುತ್ತೆ. ಮಾವಿನಕಾಯಿ ಉಪ್ಪಿನಕಾಯಿ ಹಾಕ್ಕೊಂಡು , ಮಜ್ಜಿಗೆ ಇಲ್ಲ ತುಪ್ಪ ಹಾಕ್ಕೊಂಡು ಗಂಜಿ ತಿನ್ನೋ ಮಜಾನೇ ಬೇರೆ. ಯಾವ ತಿಂಡಿನೂ ಅಷ್ಟು ಮಜಾ ಕೊಡೋದಿಲ್ಲ . ನನ್ನ ರುಚಿಕರ ತಿಂಡಿಯನ್ನ ಮುಗಿಸಿ ಕೈ ತೊಳೆದುಕೊಂಡು ಮೇಲೆದ್ದೆ.
ಸಮಯ 9:30 ಆಗಿತ್ತು ಅನ್ಸುತ್ತೆ . ತೋಟಕ್ಕೆ ಕೆಲಸಕ್ಕೆ ಬರುವವರು ಒಬ್ಬಬ್ಬರಾಗೆ ಬರೋಕೆ ಶುರು ಮಾಡಿದ್ರು . "ಏನ್ ಭಟ್ರೆ ಯಾವಾಗ ಬಂದ್ರಿ?? ಹಿಂದೆ ಏನಿದು ಜುಟ್ಟು ( ಹಿಂದೆ ಉದ್ದದ ಪೋನೀ ಬಿಟ್ಟಿದೀನಿ) ?? ಕುತ್ತಿಗೆ ಮೇಲೆ ಏನು ಹಚ್ಚೆನಾ ( ಕುತ್ತಿಗೆ ಮೇಲೆ ಟಾಟೂ ಇದೆ ) ?? ಯಾಕೆ ದಪ್ಪಾನೇ ಆಗಿಲ್ಲಾ?? " ಹೀಗೆ ಬರ್ತಾ ಇದ್ದ ಪ್ರಶ್ನೆಗಳ ಸುರಿಮಳೆಯನ್ನ ಡಿಪ್ಲೊಮ್ಯಾಟಿಕ್ ಆಗಿ ಆನ್ಸರ್ ಮಾಡೋಕೆ ಪ್ರಯತ್ನಿಸುತ್ತಿದ್ದೆ . ಬೆಂಗಳೂರಿಗೆ ಹೋಗಿ ದಪ್ಪ ಆಗಿಲ್ಲ ಅಂದ್ರೆ ಯಾವುದೋ ಮಹಾಪರಾಧ ಮಾಡಿರೋರ ಥರ ಕೇಳ್ತಾರೆ. " ರೀ ಸ್ವಾಮಿತಿನ್ನೋದು ನಮ್ಮ ಕೆಲಸ , ದಪ್ಪ ಆಗೋದು ಬಿಡೋದು ದೇವರಿಗೆ ಬಿಟ್ಟಿದ್ದು " ಅಂತ ಹೇಳಿಬಿಡೋಣ ಅನ್ನಿಸುತ್ತೆ. ಆದರೆ ಪಾಪ ಅವರಿಗೆ ಯಾಕೆ ಮನ ನೋಯಿಸಬೇಕು . ನನ್ನ ಐ ಫೋನ್ ನೋಡಿ ಇನ್ನೊಂದು ಹಂತಕ್ಕೆ ಹೋಗ್ಬಿಡ್ತು ಮಾತುಕತೆ. " ಬನ್ರೀ ಇಲ್ಲೀ ಭಟ್ಟರ ಹತ್ರ 35 ಸಾವಿರದ ಫೋನ್ ಇದೆ ನೋಡಿ ಬನ್ನಿ " ಅಂದಾಗ ನನಗೆ ಅದನ್ನ ಹೇಗೆ ತಗೋಬೇಕೋ ಗೊತ್ತಾಗ್ಲಿಲ್ಲ. ಯಾಕಪ್ಪಾ ಇವರಿಗೆ ರೇಟ್ ಹೇಳಿದೆ ಅಂತ ಅನ್ನಿಸಿಬಿಡ್ತು. ಇನ್ನೊಬ್ಬರಂತು ಲಿಮಿಟ್ ಕ್ರಾಸ್ ಮಾಡಿ " ಏನ್ ಭಟ್ರೆ 35 ಸಾವಿರ ಕೊಟ್ಟಿದೀನಿ ಅಂತೀರಾ ಬರೆ ಒಂದೇ ಬಟನ್ ಇದೆ" ಅಂದಾಗ ನಾನು ಮೂಕನಾಗಿದ್ದೆ . ಅವರ ಮುಘ್ದತೆಯನ್ನ ಶ್ಳಾಗಿಸಬೇಕೋ ಇಲ್ಲಾ ಇವರಿಗೆ ಫೋನ್ ತೋರಿಸಿ ತಪ್ಪು ಮಾಡಿದೆನೋ ಅಂತ ಆತ್ಮಾವಲೋಕನದಲ್ಲಿ ತೊಡಗಿದೆ .
ತೋಟಕ್ಕೆ ಔಷಧಿ ಹೊಡೆಯುವ ಸಮಯವಾಗಿದ್ದರಿಂದ ಕೆಲಸಕ್ಕೆ ಬಂದ ಜನ ಸ್ವಲ್ಪ ಜಾಸ್ತಿನೇ ಇದ್ರು . ಮಳೆಗಾಲದ ಸಮಯದಲ್ಲಿ ಅಡಿಕೆ ಮರದ , ಬಿಡುತ್ತಿರುವ ಅಡಿಕೆ ಕೊನೆಗಳಿಗೆ ಔಷಧಿಯನ್ನ ಸಿಂಪಡಿಸುತ್ತಾರೆ. ಮೈಲುತುತ್ತ , ಸುಣ್ಣ ಹೀಗೆ ಹಲವಾರು ಪದಾರ್ಥಗಳಿಂದ ತಯಾರಿಸುವ ಔಷಧಿಯನ್ನು ಅಡಿಕೆ ಮರಗಳ ಮೇಲೆ ಹತ್ತಿ ಅದರ ಗೊಂಚಲುಗಳಿಗೆ ಪಿಚಕಾರಿಯಿಂದ ಹೊಡೆಯಲಾಗುತ್ತೆ. ಔಷಧಿಯಲ್ಲಿ ಅಂಟಿನ ಪದಾರ್ಥ ಮಿಕ್ಸ್ ಮಾಡಿರೋದ್ರಿಂದ ಆ ಔಷಧಿ ಬೆಳೆಯುತ್ತಿರುವ ಅಡಿಕೆ ಗೊನೆಗಳಿಗೆ ಅಂಟಿಕೊಳ್ಳುತ್ತೆ . ಔಷಧಿ ಹೊಡೆಯುವ ಕೆಲಸ ಒಳ್ಳೆ ಸರ್ಕಸ್ ನೋಡಿದ ಹಾಗೆ ಇರುತ್ತೆ . ಮಳೆ ಬಿಟ್ಟಮೇಲೆ ಮರ ಒಣಗೊವರೆಗೂ ಕಾದು ಆನಂತರ ಮರ ಹತ್ಟೋಕೆ ಶುರು ಮಾಡ್ತಾರೆ . ಮರದ ಮೇಲೆ ನೇತಾಡಿಕೊಂಡು ಪಿಚಕಾರಿಯಿಂದ ಅಕ್ಕಪಕ್ಕದ ಮರಗಳಿಗೆ ಔಷಧಿ ಸಿಂಪಡಿಸಿ , ದೋಟಿಯಿಂದ ಪಕ್ಕದ ಇನ್ನೊಂದು ಮರವನ್ನು ಎಳೆದು ಅದಕ್ಕೆ ಗಾಳಿಯಲ್ಲೇ ಜಂಪ್ ಮಾಡ್ತಾರೆ. ಹೀಗೆ ಮರದಿಂದ ಮರಕ್ಕೆ ಜಿಗಿಯುತ್ತ ಆದಷ್ಟು ಮರಗಳನ್ನ ಕವರ್ ಮಾಡ್ತಾರೆ. ಅವರ ಪಿಚಕಾರಿಗೆ ಒತ್ತಡ ಕೊಡೋದಿಕ್ಕೆ ಮರದ ಕೆಳಗಡೆ ಒಬ್ಬ ಔಷದಿಯನ್ನ ಮೇಲಕ್ಕೆ ಮಶೀನ್ ನಿಂದ ಪಂಪ್ ಮಾಡ್ತಾ ಇರ್ತಾನೆ. ಹೀಗೆ ನೋಡೋಕೆ ತುಂಬಾ ಕಷ್ಟಕರವಾಗಿ ಕಾಣಿಸೋ ಕೆಲಸವನ್ನ ಅಭ್ಯಾಸ ಇರುವವರು ತುಂಬಾ ಸರಾಗವಾಗಿ ಮಾಡಿ ಮುಗಿಸ್ತಾರೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ಹುಟ್ಟಿ ಬೆಳಿದಿರೋ ಎಷ್ಟೊಂದು ಜನಕ್ಕೆ ಅದೊಂದು ಮನರಂಜನೆ ತರ ಕಾಣೋದಂತು ನಿಜ.
ಅವರ ಹತ್ತಿರ ಮಾತು ಮುಗಿಸಿ , ನಾನು ಸ್ವಲ್ಪ ನಮ್ಮನೆ ಕಡೆ ಹೋಗಿ ಬರ್ತೇನೆ ಅಂತ ನಮ್ಮಣ್ಣನ ಗಾಡಿ ತಗೊಂಡು ಹೊರಟೆ. ನಮ್ಮ ಮನೆಯಲ್ಲಿ ಈಗ ಯಾರೂ ಇಲ್ಲ. ಬೀಗ ಹಾಕಿರೋ ಮನೆ, ಸುತ್ತ ತೋಟ ಇದೆ ಅಷ್ಟೇ. ಮನೆಯ ಸುತ್ತ ಮುತ್ತ ಅದಿನ್ನೆಷ್ಟು ಹುಲ್ಲು ಬೆಳೆದಿರುತ್ತೋ ಅಂದುಕೊಂಡು ಗಾಡಿ ಓಡಿಸೋಕೆ ಶುರು ಮಾಡಿದೆ.
ಸಶೇಷ